Wednesday 7 September 2011

ರಾಮಪ್ಪ ಸತ್ಯಪ್ಪ ...!

ಭಾಗ 1  


(ದಚ್ಚುವಿನ ಈ ಮೊದಲ ಭಾಗವನ್ನ ಉತ್ತರಕರ್ನಾಟಕ ಭಾಷೆಯ ಶೈಲಿಯಲ್ಲಿ  ಬರೆದಿದ್ದೇನೆ ಅದೇ ದಾಟಿಯಲ್ಲಿ ಓದಿದರೆ ಒಳ್ಳೆ ಫೀಲ್ ಕೊಡುತ್ತೆ ಅನ್ನೋದು ನನ್ನ ಅಭಿಪ್ರಾಯ) 


  
    ಮOಜು ಕರಗುವ ಸಮಯ, ಹತ್ತಿ ಉರಿಯುತ್ತಿದ್ದ ಬೆಂಕಿ ಬೂದಿಯಾಗಿ ಹೋಗೆ ಆಡುತ್ತಿದೆ ದೂರದಲ್ಲೆಲ್ಲೋ ಒಂಟಿ ಶ್ವಾನದ ಕೂಗು, ಎತ್ತರದಲ್ಲಿ ಹಾರುತ್ತಿರುವ ನರಹದ್ದಿನ ನೆರಳು ನೆಲದ ಮೇಲೆ, ಅಲಲ್ಲಿ ಹೂತು ಹೋದ ಹೆಣಗಳನ್ನು ಬಗೆದು ತೆಗೆದು ಆಚೆ ಎಸೆದಂತೆ ಕಾಣುತ್ತಿರುವ ತಲೆ ಬುರುಡೆಗಳು, ಎಣಿಕೆ ಇಲ್ಲದಷ್ಟು  ಮನುಷ್ಯನ ಸಮಾಧಿಗಳು ಯಾರಾದರು ಊಹಿಸಬಲ್ಲರು ಅದೊಂದು ರುದ್ರ ನರ್ತನ ತುಂಬಿದ ರುದ್ರಭೂಮಿ, ಯಮಲೋಕದ ಯಮಧೂತರು, ಶಿವಲೋಕದ ಶಿವಧೂತರು ಕಾದು ಕುತಿರುವರೆಂದು ನಂಬಿರುವ ಪವಿತ್ರ ಸ್ಥಳ ಉರಾಚೆಗಿನ ಸ್ಮಶಾಣ.....! 



"ಲೇ..ಲೇ.. ಸತ್ಯಪ್ಪ ಬಾರೋ ಬೇಗ ಬಾರೋ ಬೇಗ" ಸ್ಮಶಾಣದ ಗೇಟಿನಾಚೆ ನಿಂತು ರಾಮಪ್ಪ ರುದ್ರಭೂಮಿ ಕಾವಲುಗಾರ ಸತ್ಯಪ್ಪನನ್ನು ಗಾಬರಿಯಿಂದ ಕರೆದ 

"ಏನ್ ರಾಮಪ್ಪ ಬೆಳಗ್ಗೆ ಬೆಳಗ್ಗೆ ನನ್ನ ಕರಿತ ಇದಿಯಾ ನೀರ್ ಕಡೆ ಬಂದಿದ್ಯ ಏನ್ ಸಮಾಚಾರ...?" ತಲೆಗೆ ಟವೆಲ್ ಕಟ್ಟುತ್ತ ಸಣ್ಣ ಗುಡಿಸಲಿನಿಂದ ಹೊರಬಂದ ಸತ್ಯಪ್ಪ ನುಡಿದ 

"ಅಯ್ಯೋ ಸಮಾಚಾರ ಇರಲಿ ಅಲ್ನೋಡೋ ಯಾವ್ದೋ ಹೆಣ ಗುಂಡಿಯಿಂದ ಹೊರಗ ಬಿದ್ದದಾ, ನೀರಕಡೆ ಹೋಗೋಣು ಅಂತ ಬಂದ್ನೋ ಅದನ್ನ ನೋಡಿ ಭಯಪಟ್ಟು ನೀರಕಡೆ ಹೋಗ್ಲಿಲ್ಲೋ ಸತ್ಯಪ್ಪ "

"ಒಹ್.. ಒಹ್.. ಹೌದಲ್ಲೋ ಆದ್ರೆ ನನಗೇನೋ ಅದು ಗುಂಡ್ಯಾಗಿನ ಹೆನ ಅಂತ ಅನಿಸ್ತಿಲ್ಲಪ್ಪ" ಸತ್ಯಪ್ಪ ಅತ್ತ ನೋಡುತ್ತಾ ಹೇಳಿದ

ಹಂಗಾರ ಯಾರಾದ್ರು ಕೊಲೆ ಮಾಡಿ ತಂದು ಇಲ್ಲಿ ಹಾಕ್ಯಾರ ಅಂತಿಯಾ..? ಅನುಮಾನವೆಂಬಂತ್ತೆ ರಾಮಪ್ಪ ಕೇಳಿದ

"ಆಯ್ಯೋ ಅಯ್ಯೋ ಬಿಡ್ತು ಅನ್ನೋ ನಾನು ಇರುವಾಗ ಅದ್ಯಾರು ಹಂಗ ಮಾಡ್ತಾರ ನೀನು ಹುಲ್ಲು ಕಡ್ಡಿನ ತಿಳಿದನ ದೊಡ್ದು ಗುಡ್ಡ ಮಾಡಬೇಡ"

ಇಲ್ಲೋ ಮಾರಾಯ ನನಗೆ ಯಾಕೋ ಹಂಗಾ ಅನಿಸಕತ್ತೈತಿ... ನೀನಾ ಏನಾದ್ರು...? ರಾಮಪ್ಪ ಇನ್ನೂ ಮಾತಾಡುತ್ತಿದ್ದ ಅಷ್ಟರಲ್ಲೇ ಸತ್ಯಪ್ಪ ಸಿಟ್ಟಿನಿಂದ "ಲೇ...ಲೇ.. ನಿನ್ನಾಪ್ನು ಏನ್ ಮಾತಾಡಕತ್ತಿಯೋ ಸುಮ್ನ ಇರು,,, ಬಾ ಹತ್ರ ಹೋಗಿ ನೋಡೋಣಂತ"

"ಅಯ್ಯೋ...ನನಗ್ಯಾಕ ಬೇಕು..? ನಾ ಚೊಲೋ ಇರೋದು ನಿನಗ ಇಷ್ಟಿಲ್ಲಂತ ಕಾಣ್ತತಿ ಅದ್ಕ ನನ್ನ ಕರಿಯಕತ್ತಿಯ ನನ್ನ ಹೆಂಡ್ತಿ ಮನೆಯಾಗ ಕಾಯ್ತಾ ಇರ್ತಾಳ ನೀರಕಡಿ ಹೋದ ನನ್ನ ಗಂಡಾ ಇನ್ನೂ ಬಂದಿಲ್ಲಂತ ನಾ ಹೋಗ್ತನಪ್ಪ"

ಲೇ..ಲೇ.. ಮಗನ ಒಳಗ ದಬ್ಬಹಾಕೊಂಡು ಮಂಕಡವ್ನ ಎಬ್ಬಿಸಿ ಕರೆದು ಗುಂಡ್ಯಾಗಿನ ಹೆಣ ಹೊರ ಬಿದೈತಿ ಅಂತ ಗುಲ್ಲು ಎಬ್ಬಿಸಿ ಈಗ ನೋಡೋಣ ಬಾ ಅಂದ್ರ ಹೆಂಡ್ತಿ ನೆಪ ಹೇಳಿ ಹೊಂಟಿಯಾ, ಈಗೇನ್ ಒಳ್ಳೆ ಮಾತಿಲಿ ಬರ್ತೀಯ ಇಲ್ಲಾ ಅದಾ ಗುಂಡ್ಯಾಗ ನಿನ್ನ ಹೂತು ಬಿಡ್ಲಾ...? ಸತ್ಯಪ್ಪ ರಾಮಪ್ಪನನ್ನು ಗಧರಿಸಿದ

ಹ್ಮಂ ಹ್ಮಂ ಹ್ಮಂ ಹೂತು ಹಾಕೋನ ನೀನು ಅದಾ ಕೆಲ್ಸ ಅಲ ನಿಂದು.. ಗುಂಡ್ಯಾಗಿನ್ ಹೆಣ ತಗ್ದು ಮ್ಯಾಲ್ ಹಾಕ್ತಿಯ ನಾ ಸುಮ್ನಾ ಇದ್ರ ಅದಾ ಗುಂಡ್ಯಾಗ ನನ್ನ ಹಾಕಿ ಮಣ್ಣು ಮುಚ್ಚುತ್ತಿಯಾ..! ಆದದ್ದ್ ಆಗ್ಲಿ ನಡಿ ನಾನು ಬರ್ತೀನಿ ಸುಮ್ನಾ ಮುಚ್ಚಿಕೊಂಡು ಮನೆಕಡೆ ಹೋಗೋದು ಬಿಟ್ಟು ತಪ್ಪು ಮಾಡ್ದೆ..! ರಾಮಪ್ಪ ಗೊಣಗುತ್ತಾ  ಸತ್ಯಪ್ಪನನ್ನು ಹಿಂಬಾಲಿಸಿದ 

ದೊಡ್ಡೋರು ಸುಮ್ನ ಹೇಳಿಲ್ಲ ಮಾಡಿದ್ದುಣ್ಣೋ ಮಾರಾಯ ಅಂತ ಬಾ..... ಬಾ....! ಅನ್ನುತ್ತಾ ಮುಂದೆ ನಡೆಯುತ್ತಿದ್ದ ಸತ್ಯಪ್ಪನನ್ನ ತಡೆದು "ಲೋ..ಲೋ...ಸತ್ಯಪ್ಪ ಆಕಸ್ಮಾತ್ ಆ ಹೆಣ ಎದ್ದು ಬಾಯಿ ಬಿಟ್ರಾ...? ನಾ ಅಲ್ಲೇ ಬಾಯಿಬಾಯಿ ಬಡ್ಕೊಂಡು ಸತ್ತು ಹೋಗ್ತಿನೋಯಪ್ಪ ನನ್ನ ಹೆಂಡ್ತಿಗೆ ಹೇಳ್ಕೋಳ್ಳಕಂತ ನಾನೊಬ್ನ ಗಂಡ ಇರೋದು ನಿನ್ನ ಕೈ ಮುಗಿತಿನೋ ಬಿಟ್ಟುಬಿಡೋ ನಾ ತಿರುಗಿ ನೋಡ್ದಂಗ ಹೋಗ್ತಿನೋ" ರಾಮಪ್ಪ ಹೆದರಿದವನಂತೆ ಕೇಳಿಕೊಂಡ.

"ಹೌದಲೇ ಮಗನ ಬೇರೆಯವರ ಹೆಂಡ್ತಿರಿಗೆಲ್ಲ  ನಾಲ್ಕ್ ನಾಲ್ಕು ಗಂಡದ್ರು ಇರ್ತರೆನು ಸುಮ್ನಾ ಬರಕತ್ತಿಯ ಬಾ ನಾ ನೋಡದೆ ಇರೋ ನಾಟ್ಕದ ಡೈಲಾಗೆಲ್ಲ ಹೊಡಿಬೇಡ ನನ್ನ ಹೆಂಡ್ತಿಗು ಹೇಳ್ಕೋಳ್ಳಕ ನಾನು ಒಬ್ನಾ ಗಂಡಾ ಅಂತ ಇರೋದು" ಸತ್ಯಪ್ಪನ ಈ ಮಾತು ರಾಮಪ್ಪನಿಗೆ ಹಾಸ್ಯ ಅನಿಸಲಿಲ್ಲ "ಹಂಗಾರ ಒಂದು ಕೆಲ್ಸ ಮಾಡೋಣ" ರಾಮಪ್ಪ ನಡುವೆ ಬಾಯಿ ಹಾಕಿದ "ಹ್ಮಂ ಹೇಳ್ ಏನ್ ಮಾಡೋಣ..? ಸತ್ಯಪ್ಪ ಕೇಳಿದ 

ನಾವು ಇಲ್ಲೇ ನಿಂತು ಒಂದು ಕಲ್ಲು ಬೀಸಿ ಹೋಗಿಯೋಣ ಆಕಸ್ಮಾತ್ ಅದು ಹೆಣ ಆಗಿತ್ತು ಅಂದ್ರ ಸುಮ್ನಾ ಮಲ್ಕಂಡು ಇರ್ತಾತಿ...ರಾಮಪ್ಪ ಇನ್ನು ಮಾತಾಡುತ್ತಿದ್ದ ಅಷ್ಟರಲ್ಲೇ "ಇಲ್ಲಪ್ಪ ಅದು ಹೆಣ ಆಗ್ದೆ ದೆವ್ವ ಆಗಿತ್ತು ಅಂದ್ರಾ...?"  ಸತ್ಯಪ್ಪ ನಡುವೆ ಮಾತು ಸೇರಿಸಿದ 

ಥೊ..ಥೊ.. ನಿನ್ನಾಪ್ನು ನಿನ್ ಬಾಯಾಗ ಮಣ್ಣು ಹಾಕ... ಅದು ದೆವ್ವನ ಆಗಿದ್ರ ಮೊದ್ಲು ನಿನ್ನಾ ಹಿಡ್ಕೋಳ್ಳೋದು  ಬಿಡು ಯಾಕಂದಿ ನೀನಾ ನನಗಿಂತ ಮುಂದಾ ಇರೋದು ರಾಮಪ್ಪ ಗತ್ತಿನಿಂದಲ್ಲೇ ಹೇಳಿದ 

"ಲೇ...ಲೇ... ಅಮಾಸಿಗೆ ಹುಟ್ಟಿದವ್ನ ನಾ ಹೆಣ ಕಾಯೋನೋ ನನ್ನ ಮೂಸಿ ಕೂಡ ನೋಡಲ್ಲ ಅದು, ಏನಿದ್ರು ನಿನ್ನ ಥರ ಜನಿವಾರ ಹಾಕೊಂಡವರ್ನ ಹಿಡ್ಕತೈತಿ ನೋಡು" ಸತ್ಯಪ್ಪನ ಮಾತು ಕೇಳಿದ ರಾಮಪ್ಪ ಮೈ ಮೇಲೆ ಹಾಕಿದ್ದ ಜನಿವಾರವನ್ನ ಬಿಚ್ಚಿ ದೂರಾ ಎಸೆದು "ಬೆಳ್ಳಗೆ ಬೆಳ್ಳಗೆ ಹೆಣ ಕಾಯೋನ ಸಹವಾಸ ಮಾಡಿ ಕೆಟ್ಟೆ ಅಂತ ಗೊಣಗುತ್ತಾ ಸತ್ಯಪ್ಪನನ್ನು ಹಿಂಬಾಲಿಸುತ್ತಾನೆ 

ಏನ್ಲೇ ರಾಮಪ್ಪ ಒಬ್ನಾ ಗೊಣಗಾಕತ್ತಿಯ..?

"ಲೋ.. ಸತ್ಯಪ್ಪ ಯಾಕೋ ಹೋಟ್ಯಾಗ ಗೋರ್...ಗೋರ್..ಗೋರ್... ಅಂತೈತೋ ಒಂದು ಐದು ನಿಮಿಷ್ಯ ನೀರ್ ಕಡೆ ಹೋಗಿ ಬರ್ತಿನೋ" OC (ನಾರ್ತ್ ಕರ್ನಾಟದಲ್ಲಿ ಪ್ರಚಲಿತ ಇರುವ ಒಂದು ಜೂಜಿನ ಆಟ ಒಸಿ ) ಆಡುವಾಗ ಪೋಲಿಸ್ ಕೈಗೆ ಸಿಕ್ಕು ತಪ್ಪಾಯ್ತು ಬಿಟ್ಟು ಬಿಡಿ ಅಂತ ಮನವಿ ಮಾಡಿಕೊಂಡಂತ್ತೆ  ರಾಮಪ್ಪ ಸತ್ಯಪ್ಪನನ್ನು ಕೇಳಿಕೊಂಡ

ಲೇ.. ಮಗನ ನೀ ನೀರ್ ಕಡೆ ಇಲ್ಲೆ ಹೋದ್ರು ಚಿಂತಿಲ್ಲ ಇವತ್ತು ನಿನ್ನ ಬಿಡೋಲ್ಲ ಉಸಿರು ಬಿಡದಂಗಾ ಬಾ..! ಸತ್ಯಪ್ಪ ನಿರ್ದಾಕ್ಷಿಣ್ಯವಾಗಿ ನುಡಿದ

ರಾಮಪ್ಪ ಏನನ್ನು ಮಾತನಾಡದೆ ಸುಮ್ಮನೆ ಸತ್ಯಪ್ಪನನ್ನು ಹಿಂಬಾಲಿಸಿದ...!

ಮುಂದುವರೆಯುತ್ತದೆ...........


30 comments:

  1. @ಸವಿ ನೆನಪುಗಳು :- ಧನ್ಯವಾದ :-)

    ReplyDelete
  2. ನಿಮ್ಮ "ದಚ್ಚು" ಎಷ್ಟು ಭಾಗಗಳಾಗಿ ಬರುತ್ತೆ ಗೊತ್ತಿಲ್ಲ.ಇದು ಎಷ್ಟು ಜನರಿಗೆ ತಲಪುತ್ತದೆ ಅನ್ನೋದು ಮುಖ್ಯ. ಭಾಷೆ-ಪದ- ಪಾತ್ರಗಳು ಅರಳಿಕೊಳ್ಳುವ ಭಾವ ಪಕ್ವತೆ ಪಡೆದುಕೊಳ್ಳಬೇಕಿತ್ತು ಅನ್ನಿಸಿತು.ಏಕೆ ಈ ರೀತಿ ಮಾತು ಬಂತೆಂದರೆ , ಮುಂದಿನ ಭಾಗ ಗಟ್ಟಿಯಾಗಿರುತ್ತವೆ ಅನ್ನುವ ಅಶಾಭಾವನೆ ಹೊಂದಿದ್ದೇವೆ. ಇವತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿ ಕಥೆಗಾರರಿದ್ದಾರೆ. ಅವರೆಲ್ಲರಲ್ಲಿ ನಿಮ್ಮದೂ ಒಂದು ಗುರುತು ಹಾಕಲು ನಿಮ್ಮ ಬರಹದಲ್ಲಿ ಒಂದು "ಸ್ಟೈಲ್‍" ಬೇಕು. ಅದು ನೀವೇ ಬೆಳೆಸಿಕೊಳ್ಳುವಂತಹದ್ದು. ಓದುಗರನ್ನು ಓದಿಸುವಂತ ಸೆಳೆಯುತ್ತವೆ.

    ReplyDelete
  3. ಚೆನ್ನಾಗಿದೆ ಮುಂದುವರೆಸಿ..... :)

    ReplyDelete
  4. ಮಂಜು,
    ಚೆನ್ನಾಗಿದೆ..
    ಶುಭವಾಗಲಿ...
    ಮುಂದುವರೆಯಲಿ..... :)

    ReplyDelete
  5. tumba chennagitto yappa.. munduvaresu... sumna.. ottanyaga.. naavu ready adevi aa hena nodaaka..

    ReplyDelete
  6. @ರವಿ ಮುರ್ನಾಡು ಅವರೇ "ದಚ್ಚು" ಎಷ್ಟು ಭಾಗಗಳಾಗಿ ಬರುತ್ತದೆ ಅನ್ನುವ ನಿಖರವಾದ ಮಾಹಿತಿ ನನಗೂ ತಿಳಿದಿಲ್ಲ ಕಥೆ ಚನ್ನಾಗಿ ಮೂಡಿ ಬಂದರೆ ಓದುಗರಿಂದ ಓದುಗರಿಗೆ ಈ ಲೇಖನ ತಲುಪುವುದರಲ್ಲಿ ಸಂದೇಹವಿಲ್ಲ. ಮೊದಲ ಬಾರಿ ಕಾದಂಬರಿ ಬರೆಯಲು ಹೊರಟಿದ್ದೇನೆ ಪುಟ್ಟ ಪುಟ್ಟ ಹೆಜ್ಜೆಗಳು ಇನ್ನೂ ಅಂಬೆಗಾಲಿನ ಬರವಣಿಗೆ
    ಮುಂದಿನ ಭಾಗದ ಕಥೆ ನೀವು ಹೇಳಿದಂತೆ ಗಟ್ಟಿಯಾಗಿದೆ ಆ ಆಶಾಭಾವನೆ ನನಗೂ ಇದೇ....ನಿಮ್ಮ ಪ್ರತಿಕ್ರಿಯೇಕೆ ಧನ್ಯವಾದಗಳು..!

    ಮುಂದಿನ ಭಾಗದಲ್ಲಿ ಮತ್ತೆ ಸಿಗೋಣ...!

    ReplyDelete
  7. @gundachandru :- ವಂದನೆಗಳು :-)

    ReplyDelete
  8. @ಸವಿಗನಸು :- ನಿಮಗೂ ಕೂಡ ಧನ್ಯವಾದ :-) ಓದುತ್ತ ಇರಿ

    ReplyDelete
  9. @Satishbabu P :- ha ha ha k k istrallle henada jote baruttene kaayutta iri thq

    ReplyDelete
  10. ರವಿ ಮುರ್ನಾಡು avru helidu matne nanu heltidini....

    ReplyDelete
  11. tumba chenagide enagitte anno kutuhala manju....

    ReplyDelete
  12. @Chinnu9476:- haagadre ರವಿ ಮುರ್ನಾಡು avarige kotta reply yanne nimagu saha anta tiliyiri dhanyavaada

    ReplyDelete
  13. ಮಂಜು ಚನ್ನಾಗಿದೆ ಪ್ರಯತ್ನ...ಹೌದು ನಿನ್ನದೇ ಛಾಪು ಅಗತ್ಯ..ಹಾಗೇ ಕೆಲವು ಪದ ಬಳಕೆ ಪರಿಶೀಲಿಸಿ ಹಾಕು...ಉದಾ: ಗತ್ತಿನಿಂದಲ್ಲೇ...ಇದ್ರಲ್ಲಿ ಗತ್ತಿನಿಂದಲೇ ಇರಬೇಕು...ಅಥವಾ ಗತ್ತಿನಿಂದ ಅಲ್ಲೇ ಹೇಳಿದ ಅಂತಾನಾ..? ಯೋಚಿಸಬೇಕು...
    "ರಾಮಪ್ಪ ಏನನ್ನು ಮಾತನಾಡದೆ" ಇದರಲ್ಲಿ -ಏನನ್ನೂ - ಮಾಡಿದ್ರೆ ಒಳಿತು. ಹೀಗೆ...ಶುಭವಾಗಲಿ

    ReplyDelete
  14. manjanna masta aiti bega mundavarisu.. nanga tention agaka hataiti....

    ReplyDelete
  15. ಚೆನ್ನಾಗಿದೆ ದಚ್ಚು ,ಮುಂದುವರೆಸಿ ನಿಮ್ಮ ಅಂಬೆಗಾಲ ಪುಟ್ಟ ಪುಟ್ಟ ಹೆಜ್ಜೆಯಂತ ಲೇಖನವನ್ನ , ತುಂಬಾ ಚೆನ್ನಾಗಿದೆ

    ReplyDelete
  16. @ಅಜಾದ್ ಸರ್ : ಮುಂದಿನ ಭಾಗಗಳಲ್ಲಿ ನೀವು ನನ್ನದೇ ಛಾಪು ಕಾಣುವಿರಿ...! ಪದ ಬಳಕೆಗಿಂತ ಟೈಪಿಂಗ್ ನಲ್ಲಿ ಸ್ವಲ್ಪ ಗಮನ ಕೊಡ್ಬೇಕು ಅನಿಸುತ್ತೆ ಅವಸರವಸರದ ಟೈಪಿಂಗ್ ನಲ್ಲಿ ತಪ್ಪುಗಳು ಆಗುತ್ತಿವೆ ತಿದ್ದಿಕೊಳ್ಳುತ್ತೇನೆ.... ನಿಮ್ಮ ಬೆಂಬಲ ಹೀಗೆ ಇರಲಿ ಧನ್ಯವಾದಗಳು

    ReplyDelete
  17. @ನನಸಾಗದ ಕನಸು : ಟೆನ್ಶನ್ ಮಾಡ್ಕೋ ಬೇಡ್ರಿಯಪ್ಪಾ ಸ್ವಲ್ಪ ತಡ್ಕೊಳ್ಳಿ ಮುಂದುವರಿಸೋಣ...! thq

    ReplyDelete
  18. @ಕಿನ್ನೋಡಿಗುತ್ತು ಪ್ರಮೋದ್ ಶೆಟ್ಟಿ :- ಒಹ್..ಒಹ್... ತುಂಬಾ ಸಂತೋಷ ಅಂಬೆಗಾಲಿನ ದಚ್ಚುವನ್ನು ಮೆಚ್ಚಿದಕ್ಕೆ :-) ಓದುತ್ತ ಇರಿ ವಂದನೆಗಳು

    ReplyDelete
  19. ಮಂಜಣ್ಣ ತುಂಬಾ ಚಂದ ಹೈತೋ ಮಾರಾಯ !
    ತುಂಬಾ ಚೆಂದಗೆ ಬರೆಯ ಹೊರಟಿದ್ದೀಯ ಆ ದ್ಯಾವ್ರು
    ನಿಂಗ ಹೊಳ್ಳೆದು ಮಾಡ್ಲಿ. ಮುಂದಿನ ಭಾಗಗಳನ್ನು
    ತಪ್ಪದೆ ನಿರೀಕ್ಷಿಸುತ್ತಿದೇನೆ.
    ಇಂತಿ
    ಮಂಜು ಅಭಿಮಾನಿ

    ReplyDelete
  20. @Love Gowda :- ನಿಮ್ಮ ಅಭಿಮಾನಕ್ಕೆ ನಾ ಋಣಿ ರೀ... ಮುಂದಿನ ಭಾಗದಲ್ಲಿ ಮತ್ತೆ ಸಿಗೋಣ ರೀ... ಧನ್ಯವಾದ :-)

    ReplyDelete
  21. curious beginning. chennagi concentrate madi. all the best.

    ReplyDelete
  22. @ಗುಬ್ಬಚ್ಚಿ :- Oh... k thq sir :-)

    ReplyDelete
  23. ಮಂಜುರವರೇ ಕಾದಂಬರಿ ತುಂಬಾ ಚೆನ್ನಾಗಿದೆ. ತಾವು ಬಳಸಿರುವ ಭಾಷಾ ಶೈಲಿ ಕೂಡ ಚೆನ್ನಾಗಿದೆ.

    ಡಚ್ಚುವಿನ ಮುಂದಿನ ಭಾಗಗಳ ನಿರೀಕ್ಷೆಯಲ್ಲಿ ಕಾದಂಬರಿಯ ಅಭಿಮಾನಿಗಳು,

    ReplyDelete
  24. ಭಯದ ನಡುವೆ ಹಾಸ್ಯ ಕೂಡ ಮಿಶ್ರಿತವಾಗಿದೆ.

    ReplyDelete
  25. @ಗೆಳತಿ : ತುಂಬಾ ಧನ್ಯವಾದಗಳು ಆದಷ್ಟು ಬೇಗ ಮುಂದಿನ ಭಾಗವನ್ನ ಪ್ರಕಟಿಸುತ್ತೇನೆ

    ReplyDelete