Monday, 10 October 2011

ಚಕ್ಕಡಿ ಗಾಡಿ ಮತ್ತು ಬಡ ಭಿಕ್ಷುಕಿ..!


ದಚ್ಚು ಕಥೆಯ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ http://dacchudoddamani.blogspot.com/2011/09/blog-post.html
ದಚ್ಚು ಕಥೆಯ ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ http://dacchudoddamani.blogspot.com/2011/09/1.htmlಧೈವ ಭಕ್ತನಾಗಿದ್ದ ಸತ್ಯ ಸಂಗನಿಗೆ ಹೊರೆಯಾಗಬಾರದೆಂದು ಭಾವಿಸಿ ಎಲ್ಲಾದರು ಕೆಲಸಕ್ಕೆ ಸೇರಿಕೊಂಡು ಬಂದ ಆದಾಯದಲ್ಲಿ ಸಂಗನ ಜೊತೆ ಜೀವನ ನಡೆಸೋಣ ಎಂದೂ ಕೊಂಡಿದ್ದ ಆದರೆ  ಅಂದುಕೊಂಡ ಹಾಗೆ ಜೀವನ ನಡೆಯೋದಿಲ್ಲವಲ್ಲಾ ತಾ ಒಂದು ಬಗೆದರೆ ಧೈವ ಮತ್ತೊಂದು ಬಗೆಯುತ್ತೆ ಅನ್ನೋದು ಸತ್ಯನ ಬಾಳಲ್ಲಿ ನಿಜವೆನಿಸಿತು, ಸಂಗನ ಜೊತೆ ದೋಣಿ ನಡೆಸಲು ಕೆಲವು ಬಾರಿ ಹೋದರು ತುಂಬಿ ಹರಿಯುವ ತುಂಗಭದ್ರೆಯನ್ನ ನೋಡಿದರೆ ಅವನಿಗೆ ಎಲ್ಲಿಲ್ಲದ ಆಕ್ರೋಶ, ಸಿಟ್ಟು, ಎಷ್ಟೋ ಬಾರಿ ಭಯಗೊಂಡು ಬಿಕ್ಕಿಬಿಕ್ಕಿ ಅತ್ತದ್ದು ಉಂಟು, ಇದನೆಲ್ಲಾ ಗಮನಿಸುತ್ತಿದ್ದ ಸಂಗಾ ಒಮ್ಮೆ ಸತ್ಯನನ್ನು ಕರೆದು "ಲೋ ಮಗ ನಿಂಗ್ಯಕ್ಲಾ  ಈ ಕಷ್ಟ ನಿಂದಿನ್ನು ಚಿಕ್ಕ ವಯಸ್ಸು ಮನೆಕಡೆ ಆಡ್ಕೊಂಡು ಇರು ಯಾವ್ದಕ್ಕೂ ಚಿಂತೆ ಮಾಡಬೇಡ ನಾ ನಿನ್ನ ಸಾಕ್ತೀನಿ ಹೋಗ್ ಮನಿಹತ್ರ ಹುಡುಗ್ರು ಜೋಡಿ ಆಡು ಹೋಗು" ಎಂದೂ ಬುದ್ಧಿವಾದ ಹೇಳಿ ಸಮಾಧಾನ ಮಾಡುತ್ತಿದ್ದ  ಆದರೆ ಒಂಟಿತನ ಮಾತ್ರ ಅವನನ್ನು ಬಿಡಲಿಲ್ಲ ಮಕ್ಕಳ ಜೊತೆ ಬೆರೆತು ಆಡುವ ವಯಸ್ಸಿನಲ್ಲಿ ತಂದೆ ತಾಯಿಯ ಅಗಲಿಕೆಯ ದುಃಖ ಅವನ ಮನಸ್ಸಲ್ಲಿ ಹೆಮ್ಮರವಾಗಿ ಬೆಳೆಯುತ್ತ ಬಂತು ತನ್ನವರಿಲ್ಲದ ತನ್ನವರಲ್ಲದ ಅಪರಿಚಿತ ಊರಿನಲ್ಲಿ ಪರಿಚಿತನಾಗಿ ಹೊಂದಿಕೊಳ್ಳುವುದು ಯಾರಿಗಾದರು ಹೊಸತರಲ್ಲಿ ಕಷ್ಟಸಾದ್ಯ ಅದು ಆ ಚಿಕ್ಕ ವಯಸ್ಸಿನಲ್ಲಿ ....


ತನ್ನಷ್ಟೇ ವಯಸ್ಸಿನ ಹುಡುಗರೊಂದಿಗೆ ಬೆರೆತು ಆಡೋಣವೆಂದರೆ ಅಲ್ಲಿಯೂ ಕೂಡ ಇವನ ಬಗ್ಗೆ ಕಟುವಾದ ಟೀಕೆಗಳು ಹುಟ್ಟುತ್ತಿದ್ದವು ಕೆಲವು ಮಕ್ಕಳಂತೂ ಇವನನ್ನು ಸೇರುತ್ತಿರಲಿಲ್ಲ ಆ ಚಿಕ್ಕ ಚಿಕ್ಕ ಮಕ್ಕಳ ಬಾಯಲ್ಲಿ "ಲೇ ಅವ ಅಪ್ಪ ಅಮ್ಮನ ನುಂಗಿದವ ಅವನ್ ಕೂಡ ಆಡೋದ್ ಬೇಡ್ರೋ" ಅನ್ನೋ ಹಲವು ದೊಡ್ಡ ದೊಡ್ಡ ಮಾತುಗಳು ಕಿವಿಗೆ ಪ್ರತಿನಿತ್ಯ ತಾನು ಪಠಿಸುವ ಶ್ಲೋಕಗಳಂತೆ ಸತ್ಯನನ್ನು ಆವರಿಸಿದ್ದವು...

ಹೀಗೆ ಸುಮಾರು ದಿನಗಳ ನಂತರ ದೇವಸ್ತಾನದ ಬಳಿ ಭಿಕ್ಷೆ ಬೇಡುತ್ತಿದ್ದ ಹಣ್ಣಣ್ಣು ಮುದುಕಿ ಒಬ್ಬಳು ಅಚಾನಕ್ ಆಗಿ ಮಟಮಟ ಮಧ್ಯಾನ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಜಾರಿ ಬಿದ್ದಾ ಕಲ್ಲಿನ ಏಟುಗಳಿಗೆ ಆ ಮುದುಕಿ  ಬಿದ್ದಲ್ಲಿಯೇ ಪ್ರಾಣ ಬಿಟ್ಟಳು, ದೇವರ ದರ್ಶನಕ್ಕಾಗಿ ಬಂದಿದ್ದವರೆಲ್ಲ ಮೂಖ ಪ್ರೇಕ್ಷಕರಂತೆ ಸುಮ್ಮನೆ ನೋಡುತ್ತಾ ನಿಂತಿದ್ದರೆ ವಿನಃ ಅವರಲ್ಲಿ ಯಾರೊಬ್ಬರು ಆಕೆಯನ್ನ ಪೋಷಿಸಲು ಮುಂದಾಗಲಿಲ್ಲ, ಮಡಿ ಮೈಲಿಗೆ, ಮೇಲು ಕೀಳು, ಜಾತಿ ಧರ್ಮ ಇವುಗಳ ಸುಳಿಯಲ್ಲಿ ಬದುಕು ನಡೆಸುತ್ತಿದ್ದ ಅಲ್ಲಿನ ಶ್ರೀಮಂತ ಭಿಕ್ಷುಕರಿಗೆ ಆ ಮುದುಕಿಯ ಕೊನೆಯ ಉಸಿರಿನ ಸದ್ದು ಹೇಗೆ ತಾನೇ ಕೇಳಿಬರಬೇಕು..? ಹೇಳಿ ಕೇಳಿ ಮೊದಲೇ ದೇವಸ್ಥಾನದ ಬಡ ಭಿಕ್ಷುಕಿ...! ದೇವಸ್ತನಕ್ಕೆಂದು ಬರುತ್ತಿದ್ದ ಕೆಲವರಂತೂ ಈ ವಿಷಯ ತಿಳಿದ ತಕ್ಷಣ ಅಲ್ಲಿಂದಲೇ ವಾಪಸ್ ಮನೆಗೆ ಹೋಗುತ್ತಿದ್ದರು ಗರ್ಭ ಗುಡಿಯಲ್ಲಿ ಪೂಜೆ ಮಾಡುವ ಪೂಜಾರಿ ಪ್ರಪಂಚವೇ ತನ್ನೊಬ್ಬನ ತಲೆ ಮೇಲೆ ಬಿದ್ದ ರೀತಿಯಲ್ಲಿ ಮಂತ್ರ ಹೇಳುತ್ತಾ "ಹಾಳಾದ್ ಮುದುಕಿ ಸಾಯೋಕೆ ಬೇರೆ ಜಾಗವೇ ಸಿಗ್ಲಿಲ್ಲ ಅನಿಸುತ್ತೆ ಬಂದು ಇಲ್ಲೆ ಸಾಯ್ಬೇಕಿತ್ತ... ಅಪಶಕುನ.. ಅಪಶಕುನ.." ಅನ್ನುತ್ತಲೇ ದೇವರಿಗೆ ಹೊಗಳನ್ನ ಏರಿಸುತ್ತಿದ್ದ, ಇನ್ನೂ ಬೆಳಗ್ಗೆಯಿಂದ ಸಂಜೆಯ ತನಕ ಕೆಲಸವಿಲ್ಲದೇ ಹಾಳು ಹರಟೆ ಹೊಡೆಯುತ್ತ ಕೂತಿದ್ದ ಐದಾರು ಊರಿನ ಹಿರಿಯ ತಲೆಗಳು ಭಿಕ್ಷುಕಿಯ ಸ್ಥಿತಿ ಅರಿತು ಜೀವ ಹೋಗಿರುವುದನ್ನು ದೂರದಿಂದಲೇ ಖಚಿತಪಡಿಸಿಕೊಂಡು ಹೆಣ ಸಾಗಿಸಲು ಕೆಳಹಟ್ಟಿಗೆ ನಾಲ್ಕೈದು ಜರನನ್ನು ಕರೆತರಲು ಒಬ್ಬನನ್ನು ಕಳುಹಿಸಿದರು ಎಷ್ಟು ಹೊತ್ತಾದರೂ ಹೊಲೆಯರು ಬರಲಿಲ್ಲ ಅವರಲ್ಲಿ ಈಗೀಗ ಒಗ್ಗಟ್ಟು ಜಾಸ್ತಿಯಿತ್ತು ಅಲ್ಲದೆ ತಮ್ಮದೇ ಆದ ಒಂದು ಸಂಘವು ಇತ್ತು ,
ಮೇಲ್ಹಟ್ಟಿಯವರಿಂದ ಯಾವಾಗಲು ಶೋಷಣೆಗೆ ಒಳಗಾಗುತ್ತಿದ್ದ ಆ ಜನರಲ್ಲಿ ನಾವು ಕೀಳಲ್ಲ ಅಂತ ತೋರಿಸಿಕೊಳ್ಳುವುದೇ ಅವರ ಸಂಘದ ಮುಖ್ಯ ಉದ್ದೇಶವಾಗಿತ್ತು, ಆ ಸಂಘದ ಮುಖಂಡ ಕೆಂಚಾನ ಮಾತನ್ನು ಅಲ್ಲಿ ಯಾರು ಮೀರುತ್ತಿರಲಿಲ್ಲ, ದೇವಸ್ತಾನದಲ್ಲಿ ಜೀವ ಬಿಟ್ಟ ಭಿಕ್ಷುಕಿಯ ಶವ ಸಂಸ್ಕಾರ ಮಾಡಲು ಮೇಲ್ಹಟ್ಟಿಯಿಂದ ನಮ್ಮನ್ನ ಕರೆಯಲು ಯಾರಾದರು ಬಂದೆ ಬರ್ತಾರೆ ಅನ್ನುವುದು ಮೊದಲೇ ಗೊತ್ತಿದ್ದ ಕೆಂಚಾ ಕೆಲವು ಮಂದಿಯನ್ನು ತನ್ನ ಬಿಡಾರಕ್ಕೆ ಗೌಪ್ಯವಾಗಿ ಕರೆದು "ನೋಡ್ರಿ ಇದಾ ಒಳ್ಳೆ ಸಮಯ ನಾವು ಕೀಳು ಅಲ್ಲಾ ಅಂತ ಸಾಬಿತ್ ಪಡಿಸೋಕ , ಒಂದು ಮಾತ್ ಹೇಳ್ತೀನಿ ಕೇಳಿ ಯಾವನೇ ಬಂದು ಏನ್ ಒದರಿದ್ರು ನಾವ್ಯಾರು ಆ ಭಿಕ್ಷುಕಿ ಶವನ ಸಂಸ್ಕಾರ ಮಾಡೋದಲ್ಲ ಬರೀ ಮುಟ್ಹಾಕ್ ಸಹಿತಾ ಹೋಗೋದು ಬ್ಯಾಡ, ಈಟು ವರ್ಷ್ಯ ನಮ್ಮನ್ ಆ ಮೇಲ್ಹಟ್ಟಿ ಅವರು ಆಳಿದ್ದು ಸಾಕು ಇನ್ ಮುಂದ  ನಾವು ಏನ್ ಅಂತ ತೋರಿಸೋನ ಇನ್ಮುಂದಾ ನಾವ್ ಏನಂತ ಅವರಿಗೆ ಗೊತ್ತಾಕೈತಿ" ಅನ್ನೋ ಸೂಚನೆ ಕೊಟ್ಟಿದ್ದ ಅದಕ್ಕೆ ಹೌದು ಅನ್ನುವಂತೆ ಎಲ್ಲರೂ ತಲೆ ಆಡಿಸಿದ್ದರು, ಮೇಲ್ಹಟ್ಟಿಯಿಂದ ಮೂರುನಾಲ್ಕು ಬಾರಿ ಯಾರೋ ಒಬ್ಬ ಬಂದು ಕರೆದು ಹೋಗಿದ್ದ ಅವನ ಮಾತಿ ಕೆಳದವರಹಾಗೆ  ಊರಿನ ಕಡೆ ಯಾರು ತಲೆಹಾಕದೆ ತಮ್ಮ ತಮ್ಮ ಬಿಡಾರಗಳಲ್ಲೇ ಅಂದಿನ ದಿನದ ಸಮಯ ಕಳೆಯಲು ನಿರ್ಧರಿಸಿದ್ದರು. 


ಸಮಯ ಮೀರುತ್ತಿತ್ತು ಗರ್ಭಗುಡಿಯ ಮೇಲೆ ಹದ್ದುಗಳ ಹಾರಾಟ ಆಗಲೇ ಶುರುವಾಗಿತ್ತು, ಅಲ್ಲಿದ್ದವರಲ್ಲಿ ಒಬ್ಬ ನುಡಿದ "ಗರ್ಭಗುಡಿಮ್ಯಾಗ ಹದ್ದು ಹಾರ್ತ ಇದಾವು ಊರಿಗೆ ಏನ್ ಕಾದೈತೋ ಏನೋ...ನಮ್ ಗೌಡ ಇವತ್ತು ಊರಾಗ ಇದ್ದಿದ್ರ, ಆ ಕೆಳಹಟ್ಟಿಯವರಿಗೆ ಮಾರಿ ಹಬ್ಬ ಮಾಡ್ತಿದ್ದ ಇಷ್ಟೊತ್ತಾದ್ರು ಯಾವ ಹೊಲಿಯನು ಬಂದಿಲ್ಲ ಆ ಮಾದರಹಟ್ಟಿಗರ ಹೇಳಿ ಕಳಿಸ್ರೋ ಯಾವನಾದ್ರು ಬರ್ತನೇನೋ ನೋಡುಣ ",  "ಅಯ್ಯೋ ಎಲ್ಲಿದಿಯೋ ಮಾರಾಯ ಕೆಳಹಟ್ಟಿಯವರಾ ಬಂದಿಲ್ಲ ಇನ್ನೂ ಆ ಮಾದ್ರಹಟ್ಟಿಯವರೆಲ್ಲಿಂದ ಬರ್ತಾರಾ..? ಇನ್ನೊಂದು ಸ್ವಲ್ಪಹೊತ್ತು ನೋಡಿ ಮನಿಕಡೆ ಹೋಗೋಣ ನಮ್ಗ್ಯಾಕ್ ಬೇಕು ಇದೆಲ್ಲ " ಮತ್ತೊಬ್ಬ ಹೇಳಿದ 

ಎಷ್ಟು ಹೊತ್ತು ಕಾದರು ಯಾರು ಬರುವ ಸೂಚನೆ ಕಾಣಲಿಲ್ಲ, ಸೂರ್ಯ ಹಸ್ತಂಗತನಾಗುತ್ತಿದ್ದಾನೆ, ಹದ್ದುಗಳ ಹಾರಾಟದ ಸಂಖ್ಯೆ ಹೆಚ್ಚುತ್ತಿದೆ,  ಸತ್ತ ಮುದುಕಿಯ ಮೇಲೆ ಅಲ್ಲಲ್ಲಿ ಇರುವೆಗಳು ಹರಿದಾಟುತ್ತಿವೆ, ದೂರದ ಪೊದೆಗಳಲ್ಲಿ ನಾಲ್ಕೈದು ನಾಯಿಗಳು ಮುದುಕಿಯನ್ನು ಕಿತ್ತು ತಿನ್ನುವ ಅವಕಾಶ ಸಿಗುವುದೇ ಎಂದು ಸಾವ್ಧಾನಲ್ಲಿ ಕಾದು ಕೂತಿವೆ, ದೇವಸ್ಥಾನದ ಜಗಲಿಯಲ್ಲಿ ಕುಳಿತ್ತಿದ್ದವರೆಲ್ಲ ಹೆಗಲಿಂದ ಟವಲ್ ತೆಗೆದು ಒಮ್ಮೆ ನೆಲಕ್ಕೆ ಕೊಡವಿ  ಮನೆಕಡೆ ಹೋಗಲು ಸಿದ್ದರಾಗಿದ್ದಾರೆ, ಪೂಜಾರಿ ಇಲ್ಲಿ ಏನು ನಡೆದಿಲ್ಲವೆಂಬಂತೆ ಗರ್ಭಗುಡಿಯನ್ನ ಮುಚ್ಚಿ ಮನೆಗೆ ಹೋಗಲು ಮುಖ್ಯದ್ವಾರಕ್ಕೆ ಬರುತ್ತಿದ್ದಾನೆ ಅಷ್ಟರಲ್ಲೇ ಅನೈತಿ ದೂರದಿಂದ ಏನೋ ಕರ್ಕಶ ಸದ್ದು ಕೇಳಿ ಬರುತ್ತಿದೆ ಅಲ್ಲಿ ಇದ್ದವರೆಲ್ಲ ಆ ಕಡೆ ಮೂಖ ಮಾಡಿ ಏನಿರಬಹುದೆಂದು ಚಕಿತರಾಗಿ ನೋಡುತ್ತಾ ನಿಂತಿದ್ದಾರೆ, ಎಲ್ಲರಿಗು ಒಮ್ಮೆ ಆಶ್ಚರ್ಯ ಎಲ್ಲರ ಕೈ ಬೆರಳುಗಳು ಬೆರಗಾಗಿ ಬಾಯಿ ತುದಿಗೆ ಬಂದಿವಿ ,  ಒಂದು ಕಡೆ ಗಾಲಿ ಇಲ್ಲದ ಒಂಟಿಗಾಲಿ ಚಕ್ಕಡಿಯನ್ನು ಸರ್ಕಾರಿ ಟಾರ್ ರಸ್ತೆಯ ಮೇಲೆ ಕೊರೆಯುತ್ತ ಕರ್ಕಶವಾಗಿ ಸದ್ದು ಮಾಡುತ್ತಾ ಯಾರೋ ಒಬ್ಬ ಎಳೆದುಕೊಂಡು ಬರುತ್ತಿದ್ದಾನೆ, ಸರಿಸುಮಾರು 15 ಕ್ಕೂ ಹೆಚ್ಚು  ವರ್ಷಗಳ ಹಿಂದೇ ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ಪೊದೆಗಳ ನಡುವೆ ಯಾರ ಮಾಲಿಕತ್ವವಿಲ್ಲದೆ ಬಿದ್ದಿದ್ದ ಅದೇ ಹಳೆಯ ಚಕ್ಕಡಿ ನೋಡು ನೋಡುತ್ತಲೇ ಅದು ಸತ್ತು ಬಿದ್ದಿದ್ದ ಬಡ ಭಿಕ್ಷುಕಿಯ ಹತ್ತಿರ ಬಂದು ನಿಂತಿದೆ....! 

ಮುಂದಿನ ಸಂಚಿಕೆಯಲ್ಲಿ...........

ಮತ್ತ ಸಿಗೋಣ್ರಿ ಶರಣು ಶರಣು 
ಮರೀಚಿಕೆ 
+919742495837