Thursday 15 September 2011

ದಚ್ಚು ಭಾಗ 1 ರ ಮುಂದುವರೆದ ಭಾಗ..!

ದಚ್ಚು ಕಥೆಯ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ http://dacchudoddamani.blogspot.com/2011/09/blog-post.html



ರಾಮಪ್ಪ ದೂರದಲ್ಲಿ ನಿಂತಿದ್ದ, ಹತ್ತಿರ ಹೋದಂತೆ ಸತ್ಯಪ್ಪ ಒಂದೇ ಸಮನೆ ಬಾಯಿಗೆ ಬಂದಂತೆ ಬೈಯಲು ಶುರು ಮಾಡಿದ "ಅಯ್ಯೋ ನೀನಾ..? ನಿನ್ನ ಮನೆಕಾಯೋಗ, ಹುಚ್ಚುಮುಂಡೆದೆ, ಮತಿಗೆಟ್ಟವ್ನೇ, ಥೂ ನಿನ್ನ ಮಖಕ್ಕೆ ಸ್ವಲ್ಪನಾದ್ರು ಭಯ ಅನ್ನೋದು ಇದ್ಯಾ ನಿನಗೆ..ನಿನಗೇನೋ ಬಂತು ಇಲ್ಲಿ  ಬಂದು ಮಲಗೋ ಅಂತದ್ದು ದೊಡ್ಡ ರೋಗ...ಊರ ಉಳಗೆ ಜಾಗ ಇರ್ಲಿಲ್ವ..? ಅಷ್ಟರಲ್ಲಿ ರಾಮಪ್ಪ ಹತ್ತಿರ ಬಂದು ನೋಡಿ ಮಲಗಿದ್ದವನನ್ನು ಗುರುತು  ಹಿಡಿದು " ಇವ್ನಾ... ಇವ್ನ ಬಾಯಾಗ ಮಣ್ಣು ಹಾಕ, ನಾನೆಲ್ಲೋ ಗುಂಡ್ಯಾಗಿನ ಹೆಣ ಹೊರಬಿದೈತಿ ಅಂತ ಅನ್ಕೊಂಡಿದ್ದೆ ಇವ್ನಾವ್ನು ಗುಣಿ ಪಕ್ಕ ಬಂದು ಮಲ್ಕಂಡವ್ನಾ ಇವ ಮನುಷ್ಯನ್ ಸಮ್ಮು ಇಲ್ಲಾ ಅಂತ ಕಾಣ್ತದ ಇವತ್ತು ಹೊತ್ತಾರೆ ಎದ್ದು ಯಾರ ಮಖ ನೋಡಿದ್ನೋ ಏನೋ ಒಳ್ಳೆ ಗ್ರಹಚಾರಕ್ಕೆ ಸಿಕ್ಕೊಂಡೇ ಮೊದ್ಲು ನಾ ನೀರ್ ಕಡೆ ಹೊಕ್ಕಾನಿ ಲೇ.. ಇವ್ನಿಗೆ ಸರಿಯಾಗಿ ಬುದ್ಧಿ ಕಲ್ಸು ಹಂಗಾ ಬಿಡಬೇಡ ನಾ ಊರಾಗ ಇವ್ನಿಗೆ ಮಾರಿ ಹಬ್ಬ ಮಾಡ್ತೀನಿ ನಾ ಈಗ ಹೊಂಟೆ ಮೊದ್ಲು ನೀರ್ಕಡೆ ಹೋಗ್ಬೇಕು"

"ಹೋಗಪ್ಪ ಶರಣ ನಿನ್ಯಾರು ಇಲ್ಲಿ ಹಿಡ್ಕೊಂಡಿಲ್ಲ ಅದೇನ್ ಮಾರಿ ಹಬ್ಬ ಮಾಡ್ತಿಯೋ ನಾನು ನೋಡ್ತೀನಿ" ಸತ್ಯ ಮತ್ತು ರಾಮಪ್ಪನ ಬಾಯಿಗೆ ಎಚ್ಚರವಾಗಿ ಮೈ ಮುರಿದು  ಎದ್ದಾ ದಚ್ಚು  ಕಣ್ಣು ಉಜ್ಜಿ ಆಕಳಿಸುತ್ತಾ  ಹೇಳಿದ 

ಹೋಗ್ಲಿ ಬಿಡ ಅವ ತಮಾಷಿ ಮಾಡ್ತನ ಅವನ್ ಕುಟ ಏನು ಲೇ...ರಾಮಪ್ಪ ನೀ ನೀರ್ಕಡೆ ಹೋಗಿ ಬರ್ತಾ ಹೋಟೆಲ್ ದಾಗ ಏನಾದ್ರು ದಚ್ಚುಗೆ ತಗೊಂಡು ಬಾ  ಹೋಗು ಸತ್ಯಪ್ಪನ ಮಾತಿಗೆ ರಾಮಪ್ಪ ಒಂದು ಮಾತನಾಡದೆ ಸಿಟ್ಟಿನಿಂದ ತಿರುಗಿ ನೋಡದೆ ಹೋದ  

ಅಲ್ಲೋ ನಾ ಕಾವಲು ಇದ್ರೂ  ಗೇಟ್ ಹಾಕಿದ್ರು ಹೆಂಗ ಒಳಾಗ್ ಬಂದ್ಯೋ..? ಈ ಸ್ಮಶಾಣದಾಗೆ ಬಂದು ಮಲಗಿದ್ರ ಮಂದಿ ನಿನ್ನ ಹುಚ್ಚಾ ಅಂತರಾ, ಇವತ್ತೇನೋ ಆ ಪುಕುಲು ರಾಮ ನೋಡ್ದಾ ಸರಿ ಹೋತು ಬೇರೆ ಯಾರಾರ ನೋಡಿ ಊರಾಗ ಹೇಳಿ ನಿನಗೆ ಗಾಳಿ ಸೋಕೆತಿ ಅಂತ ಊರಾಚೆ ಹಾಕಿದ್ರೆ ಏನ್ ಮಾಡ್ತಿಯೋ..? 

ನನ್ನವ್ವನ್ನ ನೆನಪಾದಗೆಲ್ಲ ನಾ ಇಲ್ಲೆ ಬಂದು ಮಲ್ಕೊಳ್ತಿನಿ ಸತ್ಯಣ್ಣ ಯಾರ್ ಏನ್ ಅಂದ್ರೇನು..? ಏನ್ ಮಾಡಿದ್ರೇನು...? 

ಲೇ  ದಡ್ಡಾ.. ಜೊತೆಗೆ ಇದ್ದೋಳು ಒಬ್ಳು ತಾಯಿ ಅವಳು ನಿನ್ನ ಬಿಟ್ಟು ಈ ಗುಣಿಯೋಳಗ ಮಂಕ್ಕಂಡಾಳ, ಈ ಉರಾಗಿನ್ ಜನ ಸರೀಲ್ಲೋ ತಮ್ಮಾ ನಾ ಹೇಳದನ್ನ ಕೇಳು, ನಾ ಹೆಣ ಕಾಯೋನಾ ಇರಬಹುದು ಇಲ್ಲಿ ಮಂದಿ ಹೇಗೆ ಅಂತ ನನಗ ಗೊತ್ತು, ನೀ ಸತ್ರು ಒಬ್ರು ನೋಡೋಲ್ಲಾ... 

ಸತ್ಯಣ್ಣ ನಮ್ಮವ್ವ ಸತ್ತಾಗ ಯಾರು ನೋಡಲಿಲ್ಲ ಇನ್ನೂ ನನ್ನ ನೋಡ್ತಾರ..? ನೋಡಲ್ಲ ಅನ್ನೋದು ನನಗೆ ಗೊತ್ತು , ಹಣೆಲಿ ಆ ಭಗವಂತ ಏನ್ ಬರ್ದವ್ನೋ ಅದಾ ಆಗೋದು. 

ಹಂಗಂತ ಸುಮ್ನಾ ಕುರ್ತಿಯಾ ? ಮುಂದಿನ ದಾರಿ ನೋಡೋ.. ಕಷ್ಟಾ ಪಟ್ಟು ನಿಮ್ಮವ್ವ ಇಲ್ಲಿ ತನಕ ಓದಿಸ್ಯಾಳ ನನ್ ಥರ ಅಕ್ಷರ ತಿಳಿಲಿಲ್ದಾವೆನಲ್ಲಾ.... ನಿಮ್ಮವ್ವ ಕಟ್ಟಿದ ಕನಸಗಳನ್ನ ನನಸ ಮಾಡೋಕ ಮನ್ಸು ಮಾಡು. ನಿಮ್ಮವನ್ನ ಮಣ್ಣಾಗ ಹಾಕಿ 5 ದಿನ ಆಯ್ತು ಯಾರಾದ್ರು ನಿನ್ನ ಹತ್ರ ಬಂದು ಒಪ್ಪತ್ತಿನ್ ಊಟ ಕೊಟ್ಟರೇನೋ...? ಕೊಡಲ್ಲ ಎಲ್ಲಾ ನೀಚ ಜನ, ಬರೀ ಧರ್ಮ ಜಾತಿ ಅಂತ ನಮ್ಮಂತವರ್ನಾ ಊರಿಂದ ಆಚೆ ಇಡ್ತಾರಾ ಈ ಊರಾಗಿನ್ ಜನ, ಎಲ್ಲಾ ಆ ಗೌಡನ್ ಕೈಯಾಗಿನ್ ಗೊಂಬೆಗಳು ಅವ್ನು ಕುಣಿಸಿದಾಂಗ ಕುಣಿತಾರ ಒಳ್ಳೇದು ಕೆಟ್ಟದ್ದು ಯಾವ್ದು ಯೋಚನೆ ಮಾಡೋಲ್ಲ ನಿಮ್ಮವ್ವನ್ ಬಹಿಷ್ಕಾರ ಮಾಡಿದ್ದು ಇದಾ ಗೌಡ ಇದಾ ಜನಾ ಇದಾ ಊರು ಸತ್ಯ ಏನು  ಅಂತ ಒಬ್ರು ಅವಳ ಬಾಯಾಗ ಕೇಳಿಲ್ಲ ನಿನಗೂ ಗೊತ್ತು 

ಗೊತ್ತು ಸತ್ಯಣ್ಣ ನೆನಸ್ಕೊಂಡ್ರೆ ಈಗ್ಲೂ ಅಳು ಬರುತ್ತೆ ನಾ ಚಿಕ್ಕವ ಏನ್ ಮಾಡೋದು ನಾ ನ್ಯಾಯ ಕೇಳಿದ್ರ ಯಾರ್ ಕೊಡ್ತಾರ ನನ್ನಕೈಯಾಗ ಏನ್ ಮಾಡೋಕ್ ಸಾದ್ಯ..? ಅತ್ತು ಅತ್ತು ಕಣ್ಣಿರು ಕೂಡ ಬತ್ತಿ ಹೊಗೈತಿ ಅವ್ವ ಇದಿದ್ರೆ ಕೈ ತುತ್ತು ಕೊಡ್ತಾ ಇದ್ಲು ಈಗ ಯಾರು ನನ್ನಾ ನೋಡ್ಕೊಳ್ತಾರ ನಾನು ಹಿಂಗ ಇನ್ನೊಂದು ನಾಕು ದಿನ ಉಪವಾಸ ಇದ್ದು ನಾನು ಸತ್ತು ಹೋಗ್ತೀನಿ... ದಚ್ಚು ಬಿಕ್ಕಿ ಬಿಕ್ಕಿ ಅಳುತ್ತಿದ್ದ, ಅಯ್ಯೋ ಹುಚ್ಚಾ.. ಹುಟ್ಟು ಸಾವು ಅನ್ನೋದು ನಮ್ಮ ಕೈಯಲ್ಲಿ ಇಲ್ಲಾ,  ಸತ್ತು ಎನ್ ಸಾದುಸ್ತಿಯಾ..?   ತಾಯಿ ಕಳಕೊಂಡ ಸಂಕಟ ನನಗೂ ಐತಿ,  ಈಗ ಎದ್ದು ಬಾ ಇಲ್ಲಿಂದ, ಬಾಯಿ ಬಿಟ್ರ ಬರೀ ದೊಡ್ಡ ದೊಡ್ಡ ಮಾತಗಳನ್ನ ಆಡ್ತಿಯ.

ಇದ್ದು ನಾನರ ಏನ್ ಸಾಧಿಸೋದು ಅದಾ..? ಈ ಕುಂಟನ ಕೈಯಲ್ಲಿ ಏನ್ ಆಕೈತಿ, ಎಲ್ಯರ ದುಡಿಯೋಣ ಅಂದ್ರ ಯಾರು ನನಗ ಕೆಲಸ ಕೊಡಲ್ಲ ಅವ್ವ ಇದ್ಲು ಹೇಗೋ ಒಂದು ಮರದ ಮಣಿಗೆ ನಾಲ್ಕು ಗಾಲಿ ಹಾಕಿ ಮಳಿ ಬಡದು ಕೂತು ತಳ್ಳು ಕೊಂಡು ಹೋಗೋ ಥರ ಮಾಡಿಕೊಟ್ಳು, ಅದುನು ಇಲ್ದೇ ಇದದ್ರೆ ನಾ ಕೂತಲ್ಲೇ ಕುರ್ಬೇಕಾಗಿತ್ತು, ಆದರೆ ನಮವ್ವು ಆಗಾಗ ಹೇಳ್ತಾ ಇದ್ಲು ಮಗ ನಿನಗೆ ಕಾಲು ಬರ್ತವೆ ಬರ್ತವೆ ಅಂತ ನನಗೂ ಅನಿಸ್ತೈತಿ ನನಗೆ ಕಾಲು ಇವತ್ತಲ್ಲ ನಾಳೆ ನಡೆಯೋಕೆ ಬರ್ತವೆ ಅಂತ ಆದ್ರೆ  ನಿನ್ನ ಆ ರಾಮಪ್ಪನ ಬಿಟ್ರ ನನಗ ಈಗ ಯಾರು ಇದರಾ ? ಊರಾಗ ಕದ್ದು ಮುಚ್ಚಿ ಹೇಗೋ ನಾಲ್ಕ ದಿನ ರಾಮಪ್ಪ ನನಗೆ ಊಟಕ್ಕ ತಂದು ಕೊಡ್ತಾ ಐದಾನ ಅವನಾದ್ರು ಎಷ್ಟು ದಿನ ಅಂತ ಕೊಡ್ತಾನ ಹೇಳು ನಾಳೆ ಆ ಗೌಡನಿಗೆ ಗೊತ್ತದ್ರಾ...? ಇದ್ದು ನಿಮಗೆಲ್ಲ ಭಾರ ಆಗೊಕ್ಕಿಂತ ಸಾಯೋದು ಮೇಲು ಈ ಮಾತುಗಳನ್ನು ಕೇಳುವಾಗ ಸತ್ಯಪ್ಪನ ಕಣ್ಣಲ್ಲಿ ನೀರು ತುಂಬಿ ಕೊಂಡಿದ್ದವು ಒಂದೈದು ನಿಮಿಷ ಮೌನದಲ್ಲೇ ಕೂತಿದ್ದ ಸತ್ಯಪ್ಪ,  ಅದು ಯಾವ ಮಾಯೆಯಲ್ಲಿ ಹೋಟೆಲ್ ನಿಂದ ತಿಂಡಿ ತಂದು ಪಕ್ಕದಲ್ಲೇ ನಿಂತಿದ್ದ ರಾಮಪ್ಪ ದಚ್ಚುವಿನ ಜೊತೆ ಮಾತಿಗಿಳಿದ "ಅವ ಏನ್ ಮಾಡ್ತಾನೋ ಏನ್ ಮಾಡಕ ಆಕಾತಿ ಊರ್ನವರು ಹೆದರುತ್ತಾರೆ ಅಂತ ನಾವು ಹೆದ್ರೋಲ್ಲ, ಸಾಯೋ ಮಾತು ಯಾಕ ಆಡ್ತಿಯ ನಾವು ಇರೋ ತನಕ ನಿನ್ನ ನಾವು ನೋಡಿಕೊಳ್ತಿವಿ ನಾವು ನಿನ್ನ ಹುಟ್ಟಿನಿಂದ ನೋಡಿದಿವಿ ಇದಾ ಕೈಯಾಗ ಎತ್ತಿ ಆಡಿಸಿದಿವಿ ಮೊದ್ಲು ನಿನ್ನ ಕಾಲು ಚನ್ನಾಗಿತ್ತು ನೀ ಓಡಾಡ್ತಾ ಇದ್ದಿ ಹೋಗ್ಲಿ ಬಿಡು ಇಗ್ಯಾಕ ಅದೆಲ್ಲ ತಗೋ ಇದನ್ನ ಮಕಗಿಕ ತೊಳ್ದುಕೊಂಡು ತಿನ್ನುವಂತೆ ಈಗ ಈ ಜಾಗ ಬಿಟ್ಟು ಎದ್ದಾ ಆಕಡೆ ಹೋಗೋಣ ಬಾ " ಎನ್ನುತ್ತಲೆ  ಸ್ಮಶಾಣದಿಂದ ದಚ್ಚುವನ್ನು ರಾಮಪ್ಪ ಸತ್ಯಪ್ಪ ಇಬ್ಬರು ಎತ್ತುಕೊಂಡು ರಸ್ತೆಯ ಬಳಿ ಹೋದರು...!  

ದಚ್ಚುವಿನ ಮನಸ್ಸಿನ ನೋವು ದುಃಖ ಯಾರಿಗೂ ಅರ್ಥವಾಗಿರಲಿಲ್ಲ ತನ್ನ ತಾಯಿಗೆ ಆದ ಬಹಿಷ್ಕಾರದಿಂದ ಊರಲ್ಲಿ ಯಾರು ಅವನನ್ನು ಸೇರುತ್ತಿರಲಿಲ್ಲ ಯಾರೊಬ್ಬರು ಇವನ ಸಾಹಯಕ್ಕೆ ಮುಂದೆ ಬಂದಿರಲಿಲ್ಲ, ಮಾತೃತ್ವ ತುಂಬಿದ ಕೆಲವು ಹೆಂಗಸರು ಮಾತ್ರ ದೂರದಲ್ಲೇ ನೋಡಿ ಅಯ್ಯೋ ಪಾಪ ಅಂದುಕೊಳ್ಳುತ್ತಿದ್ದರು ಏನಾದ್ರು ಕೈಲಾದ ಸಹಾಯ ಮಾಡಬೇಕೆನ್ನುವ ಮನಸ್ಸಾದರೂ ಊರಿನ ಧಣಿ ಆಜ್ಞೆ ನೆನಪಾಗಿ ಹಿಂದೇ ಸರಿಯುತ್ತಿದ್ದರು. ಆದರೆ ಸತ್ಯಪ್ಪ ಮತ್ತು ರಾಮಪ್ಪ ಮಾತ್ರ ದಚ್ಚು ವನ್ನು ಹಚ್ಚಿಕೊಂಡಿದ್ದರು ಅವರ ಸ್ವಭಾವವೇ ಅಂತಹದ್ದು 18 ಹರೆಯದ ದಚ್ಚು ನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಸತ್ಯಪ್ಪ  ದಚ್ಚುವಿನ ನೋವು ಏನೆಂಬುದನ್ನು ಕಂಡುಕೊಂಡಿದ್ದ ಏಕೆಂದರೆ ಅವನು ಕೂಡ ಒಬ್ಬ ಅನಾಥ,


                                     > > >                                                < < <    




ರಾಮಪ್ಪ ಮತ್ತು ಸತ್ಯಪ್ಪನ ಸ್ನೇಹ ಸುಮಾರು ವರ್ಷಗಳ ಹಿಂದಿನದು ಸತ್ಯಪ್ಪ 10 ವರ್ಷದವನಿದ್ದಾಗ ತಂದೆ ತಾಯಿಯೊಂದಿಗೆ ಜಾತ್ರೆಗೆ ಬಂದಿದ್ದ ಜಾತ್ರೆ ಮುಗಿಸಿಕೊಂಡು ಕುರುವತ್ತಿ ದಡದಿಂದ ಚಿಕ್ಕುರುವತ್ತಿಯ ದಡ ತಲುಪ ಬೇಕಿತ್ತು ದಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ತುಂಬಿ ಹರಿಯುವ ತುಂಗೆಯನ್ನು ದಾಟುವುದು ಅಷ್ಟು ಸುಲುಭದ ಮಾತಾಗಿರಲಿಲ್ಲ ಹೀಗಿರುವಾಗ ತೆಪ್ಪ (ದೋಣಿ) ನಡೆಸುವ ಸಂಗಾ ಬೇಡವೆಂದರೂ ಸತ್ಯನ ತಂದೆಯ ಒತ್ತಾಯದ ಮೇರೆಗೆ ತೆಪ್ಪವನ್ನು ನಡೆಸಲು ಒಪ್ಪಿಕೊಂಡ ತೆಪ್ಪ ಹೊರಡುವಾಗ ಇವರ ಜೊತೆ ಇನ್ನು ಹಲವರು ತೆಪ್ಪವನ್ನು ಹತ್ತಿ ಕೊಂಡರು ಒಂದೊಂದು ಮಳೆಯ ಹನಿಯು ಕಲ್ಲಿನ ಹೊಡೆತದಂತೆ ಮೈಮೇಲೆ ಬೀಳುತ್ತಿದ್ದವು ನದಿಯು ಅಷ್ಟೇ ರಭಸವಾಗಿ ಹರಿಯುತ್ತಿತು ತೆಪ್ಪದಲ್ಲಿ ತುಂಬಾ ಜನ ಕೂತಿದ್ದರಿಂದ ನದಿಯ ನೀರು ತೆಪ್ಪದ ಅಂಚನ್ನು ದಾಟಿ ಉಳಗೆ ಬರುತಿತ್ತು ಸ್ವಲ್ಪ ಸಮಯದ ನಂತರ ನದಿಯ ಮಧ್ಯದಲ್ಲಿ ಅವರು ಕುಳಿತಿದ್ದ ತೆಪ್ಪ (ದೋಣಿ) ನೀರಿನ ಅಲೆಯ ರಭಸಕ್ಕೆ ಸಿಕ್ಕು ತೆಪ್ಪದಲ್ಲಿದ್ದವರೆಲ್ಲ ಜಲಸಮಾಧಿ ಆದರು ತಪ್ಪವನ್ನು ನಡೆಸುತ್ತಿದ್ದ ಸಂಗಾ ಮುಳುಗುವಾಗ ಪಕ್ಕದಲ್ಲೇ ಕುಳಿತಿದ್ದ ಸತ್ಯನನ್ನು ಬದುಕಿಸಲು ಮುಂದಾದ ಸತ್ಯನ ಕೊರಳಲ್ಲಿ ಇದ್ದ ಶಿವಧಾರವನ್ನೇ ಗಟ್ಟಿಯಾಗಿ ಹಿಡಿದು ಎಳೆದುಕೊಂಡು ದಡಕ್ಕೆ ತಲುಪಿಸಿದ್ದ.... ಎಷ್ಟು ದಿನಗಳಾದರೂ ಸತ್ಯನ ಕಡೆಯ ಸಂಭಂದಿಕರು  ಇವನ್ನನ್ನಾಗಲಿ ಇವನ ತಂದೆ ತಾಯಿಯರನ್ನಾಗಲಿ ಹುಡುಕಿಕೊಂಡು ಬರಲಿಲ್ಲ..! ಇವನು ಕೂಡ ತನ್ನ ಊರಿಗೆ ಹೋಗುವ ಒಲವು ತೋರಲಿಲ್ಲ ಊರಿನ ಪಂಚಾಯ್ತಿಯಲ್ಲಿ ಅನಾಥನಾಗಿದ್ದ ಹುಡುಗನನ್ನ ಸಾಕುವವರ್ಯಾರು ಅಂತ ಹಬ್ಬಿದ ಪ್ರಶ್ನೆಗೆ ಉಳ್ಳವರೆಲ್ಲ ಹಿಂದೇ ಸರಿದರು ಸಂಗಾ ಮಾತ್ರ "ಬದುಕಿಸಿದ ತಪ್ಪಿಗೆ ನಾನೇ ಸಾಕ್ತೀನಿ" ಅಂತ ಪಂಚಾಯ್ತಿಯಲ್ಲಿ ಸತ್ಯನನ್ನ ಮನೆಗೆ ಕರೆದುಕೊಂಡು ಬಂದಿದ್ದಾ.

ಇಷ್ಟು ಚಿಕ್ಕ ವಯಸ್ಸಿನಲ್ಲಿ ತನಗೆ ಒದಗಿದೆ ಈ ಕಹಿ ಘಟನೆಯಿಂದ ಸತ್ಯ ಇನ್ನೂ ಹೊರಬಂದಿರಲಿಲ್ಲ, ಘಟನೆ ನಡೆದ  ಮೂರುದಿನಗಳ ನಂತರ  ನೀರಿನಲ್ಲಿ ಮುಳುಗಿ ಹೋಗಿದ್ದ ಶವಗಳು ನದಿ ತೀರದಲ್ಲಿ ಸಿಕ್ಕಾಗ ಸತ್ಯನ ಗೋಳು ಮುಗಿಲು ಮುಟ್ಟಿತ್ತು ತನ್ನ ಕೈಯಾರೆ ತಂದೆ ತಾಯಿಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಸತ್ಯ ಮಾನಸಿಕವಾಗಿ ವಿಚಲಿತನಾದ ತಂದೆ ತಾಯಿರ ನೆನಪು ಅವನನ್ನ ಕಾಡುತ್ತಿತ್ತು ತನ್ನ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ಪುರಾಣ ಕಥೆಗಳನ್ನು ತಾಯಿಯಿಂದ ಕೇಳಿ ತಿಳಿದುಕೊಂಡಿದ್ದ ಮೊದಲ ಭಾರಿಗೆ ತನ್ನ ಊರಲ್ಲಿ ನಡೆದ "ಸತ್ಯವಂತ ಸತ್ಯ ಹರಿಶ್ಚಂದ್ರ" ನಾಟಕವನ್ನು ನೋಡಿದ್ದ ಹರಿಶ್ಚಂದ್ರನ ಪಾತ್ರ ಅವನನ್ನ ಎಷ್ಟು ಸೆಳೆದಿತ್ತು ಅಂದರೆ ತನ್ನ ಹೆಸರನ್ನು ಯಾರಾದರು ಕೇಳಿದರೆ ಹರಿಶ್ಚಂದ್ರ ಅಂತ ಹೇಳಿಕೊಳ್ಳುತ್ತಿದ್ದ, ಅಲ್ಲದೆ ಪ್ರತಿ ದಿನ ತಪ್ಪದೆ ಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದ 


ಮುಂದಿನ ಸಂಚಿಕೆಯಲ್ಲಿ...........

ಮತ್ತ ಸಿಗೋಣ್ರಿ ಶರಣು ಶರಣು 
ಮರೀಚಿಕೆ . ಮಂಜು 
+919742495837 

8 comments:

  1. chennagide... Manju., chitragalu katheya bhagakke artha niDive... Maatratva tumbida... Tumba saMvedanasheelavaagide..chennagide... Manju., chitragalu katheya bhagakke artha niDive... Maatratva tumbida... Tumba saMvedanasheelavaagide..

    ReplyDelete
  2. ಅದ್ಭುತವಾಗಿ ಮೂಡಿ ಬರಕ ಅತ್ಯತಿ,
    ಇದೊಂದು ಶೋಷಿತ ವರ್ಗದವರ
    ದನಿಯಾಗಿ ಹೊರಹೊಮ್ಮುವುದರಲ್ಲಿ
    ಸಂದೇಹವೇ ಇಲ್ಲ ಮಂಜಣ್ಣ.
    ಮುಂದಿನ ಭಾಗ ಸ್ವಲ್ಪ ಬೇಗ ಬಿಡಿ

    ಇಂತಿ
    ಮಂಜು ಅಬಿಮಾನಿ

    ReplyDelete
  3. @Prathap.brahmavar :- ಧನ್ಯವಾದಗಳು ಬರಹವನ್ನು ಮೆಚ್ಚಿದಕ್ಕೆ :-) ಸಂಚಿಕೆಯನ್ನ್ನು ತಪ್ಪದೆ ಓದುತ್ತಿರಿ...!

    ReplyDelete
  4. @Love Gowda :- ನಿಮ್ಮ ಆತ್ಮೀಯತೆ ಮತ್ತು ಅಭಿಮಾನಕ್ಕೆ ನಾ ಋಣಿ...! ಕಚೇರಿಯ ಕೆಲಸದಲ್ಲೂ ಬೆಂಗಳೂರಿನ ಬ್ಯುಸಿ ಲೈಫ್ ನಲ್ಲೂ ಸ್ವಲ್ಪ ಬಿಡುವುಮಾಡಿಕೊಂಡು ನಾನು ಈ ಕಥೆಯನ್ನ ಬರೆಯುತ್ತಿದ್ದೇನೆ... ಭಾಗಗಳು ಬರುವುದು ಸ್ವಲ್ಪ ತಡವಾಗುತ್ತದೆ ಆದಷ್ಟು ಬೇಗ ನಿಮ್ಮ ಮುಂಚೆ ತರಲು ಪ್ರಯತ್ನಿಸುತ್ತೇನೆ ವಂದನೆಗಳು...

    ReplyDelete
  5. @M Sree :- ಧನ್ಯವಾದಗಳು :-)

    ReplyDelete
  6. ಹೂಂ ಕಣ್ಮಂಜೂ ಬೋ ಪಸಂದಾಗೇ ಬರ್ದಿದ್ದೀ ಕಣ್ಬುಡು...ಅದೇನ್ಮಾಡೀಯೋ ನೋಡೇ ಬುಡ್ಮಾ ಮುಂದಿನ್ಕಂತ್ನಾಗೆ....ಊಂ ಅಂತೀನಿ....

    ReplyDelete
  7. @ಜಲನಯನ :- ನೋಡಿ ನೋಡಿ ಏನೇನೆ ಮಾಡ್ತೀನಿ ಅಂತವಾ.... ನೋಡ್ತಾನೆ ಇರಿ.... ತ್ಯಾಂಕ್ಸು ನಿಮ್ಗೆ...!

    ReplyDelete